Taxation – Direct and Indirect Tax
ತೆರಿಗೆ – ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ
Taxation is the levy or financial obligation imposed by the government on its citizens and residents.
ತೆರಿಗೆಯು, ಸರಕಾರವು ತನ್ನ ಪ್ರಜೆಗಳು ಮತ್ತು ನಿವಾಸಿಗಳಿಗೆ ವಿಧಿಸುವ ಅಥವಾ ಹಣಕಾಸಿನ ಭಾಧ್ಯತೆಗಳನ್ನು ಹೇರುವುದಾಗಿರುತ್ತದೆ.
The tax structure in India is divided into direct taxes and indirect taxes.
ಭಾರತದಲ್ಲಿ ತೆರಿಗೆ ಪದ್ಧತಿಯನ್ನು ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಯಾಗಿ ವಿಭಾಗಿಸಲಾಗಿರುತ್ತದೆ.
Direct Tax / ನೇರ ತೆರಿಗೆ
Direct taxes are levied on taxable income earned by individuals and corporate entities, the burden to deposit taxes is on the assessees themselves.
ವ್ಯಕ್ತಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಗಳಿಸಿದ ತೆರಿಗೆಗೆ ಒಳಪಡುವ ಆದಾಯದ ಮೇಲೆ ನೇರ ತೆರಿಗೆಗಳನ್ನು ವಿಧಿಸಲಾಗುತ್ತದೆ, ತೆರಿಗೆಗಳನ್ನು ಠೇವಣಿ ಮಾಡುವ ಹೊರೆಯು ತೆರಿಗೆಯನ್ನು ಮೌಲ್ಯಮಾಪನ ಮಾಡುವವರ ಮೇಲೆಯೇ ಇರುತ್ತದೆ.
Income tax is one of the examples of direct tax. For example,when you start earning your salary, you have to assess your yearly tax liability and file it using the appropriate Income Tax Return (ITR).
ನೇರ ತೆರಿಗೆಯ ಉದಾಹರಣೆಗಳಲ್ಲಿ ಆದಾಯ ತೆರಿಗೆಯೂ ಒಂದು. ಉದಾಹರಣೆಗೆ, ನೀವು ನಿಮ್ಮ ಸಂಬಳವನ್ನು ಗಳಿಸಲು ಪ್ರಾರಂಭಿಸಿದಾಗ, ನಿಮ್ಮ ವಾರ್ಷಿಕ ತೆರಿಗೆ ಹೊಣೆಗಾರಿಕೆಯನ್ನು ನೀವು ನಿರ್ಣಯಿಸಬೇಕು ಮತ್ತು ಸೂಕ್ತವಾದ ಆದಾಯ ತೆರಿಗೆ ರಿಟರ್ನ್ (ITR) ಬಳಸಿ ಅದನ್ನು ಸಲ್ಲಿಸಬೇಕು.
The government exempts a basic limit of income earned from taxation.Only once your income crosses the exempted limit, you will be liable to pay taxes.
ಗಳಿಸಿದ ಆದಾಯದ ಪ್ರಾಥಮಿಕ ಮಿತಿಯವರೆಗೆ ತೆರಿಗೆ ಪಾವತಿಗೆ ಸರ್ಕಾರವು ವಿನಾಯಿತಿ ನೀಡುತ್ತದೆ. ನಿಮ್ಮ ಆದಾಯವು ವಿನಾಯಿತಿ ಮಿತಿಯನ್ನು ದಾಟಿದ ನಂತರ ಮಾತ್ರ, ನೀವು ತೆರಿಗೆಗಳನ್ನು ಪಾವತಿಸಲು ಜವಾಬ್ದಾರರಾಗಿರುತ್ತೀರಿ.
Though the burden to deposit taxes is on the assessees, the Income Tax Act has mandated the originator of payments to deduct taxes at source and remit to the appropriate tax account of the government. This is called Tax Deducted at Source (TDS).
ತೆರಿಗೆಗಳನ್ನು ಠೇವಣಿ ಮಾಡುವ ಹೊರೆಯು ತೆರಿಗೆದಾರನ ಮೇಲಿದ್ದರೂ, ಆದಾಯ ತೆರಿಗೆ ಕಾಯ್ದೆಯು, ಪಾವತಿಯ ಮೂಲದಲ್ಲಿಯೇ ಪಾವತಿದಾರನು ತೆರಿಗೆಗಳನ್ನು ಕಡಿತಗೊಳಿಸಬೇಕು ಮತ್ತು ಹಾಗೆ ಕಡಿತಗೊಳಿಸಿದ ತೆರಿಗೆಯ ಮೊತ್ತವನ್ನು ಸರ್ಕಾರದ ಸೂಕ್ತ ತೆರಿಗೆ ಖಾತೆಗೆ ಜಮಾ ಮಾಡುವುದನ್ನು ಕಡ್ಡಾಯಗೊಳಿಸಿರುತ್ತದೆ. ಇದನ್ನು ಮೂಲದಲ್ಲಿಯೇ ಕಡಿತಗೊಳಿಸಿದ ತೆರಿಗೆ (TDS) ಎಂದು ಕರೆಯಲಾಗುತ್ತದೆ.
Indirect Taxes/ ಪರೋಕ್ಷ ತೆರಿಗೆ
Indirect taxes are levied on the sale and provision of goods and services respectively and the burden to collect and deposit taxes is on sellers instead of the assessees directly.Goods and Services Tax (GST) is one of the examples of indirect taxes.
ಸರಕು ಮತ್ತು ಸೇವೆಗಳ ಮಾರಾಟ ಮತ್ತು ಪೂರೈಕೆಯ ಮೇಲೆ ಪರೋಕ್ಷ ತೆರಿಗೆಗಳನ್ನು ವಿಧಿಸಲಾಗುತ್ತದೆ ಮತ್ತು ತೆರಿಗೆಗಳನ್ನು ಸಂಗ್ರಹಿಸುವ ಮತ್ತು ಠೇವಣಿ ಮಾಡುವ ಹೊರೆ ನೇರವಾಗಿ ತೆರಿಗೆದಾರನ ಬದಲಿಗೆ ಮಾರಾಟಗಾರರ ಮೇಲೆ ಇರುತ್ತದೆ. ಸರಕು ಮತ್ತು ಸೇವಾ ತೆರಿಗೆ (GST) ಪರೋಕ್ಷ ತೆರಿಗೆಗಳ ಉದಾಹರಣೆಗಳಲ್ಲಿ ಒಂದಾಗಿದೆ.
Recent Comments