ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ – ದಾಖಲಾತಿ ಪ್ರಾರಂಭ

ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯದಲ್ಲಿ 2023-24ನೇ ಸಾಲಿನ ಪ್ರಥಮ ಪದವಿ ತರಗತಿಗಳಿಗೆ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿರುತ್ತದೆ.

B.Com, BBA, BA & BSc Courses

ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಬರುವ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಭ್ಯವಿರುವ ಬಿ.ಕಾಂ, ಬಿಬಿಎ, ಬಿಎ (ಇತಿಹಾಸ, ಅರ್ಥಶಾಸ್ತ್ರ, ಪೊಲಿಟಿಕಲ್ ಸೈನ್ಸ್, ಐಚ್ಚಿಕ ಕನ್ನಡ) ಮತ್ತು ಬಿಎಸ್ಸಿ (ಭೌತಶಾಸ್ತ್ರ, ಗಣಿತಶಾಸ್ತ್ರ, ಗಣಕಶಾಸ್ತ್ರ) ಕೋರ್ಸುಗಳಿಗೆ ಪ್ರವೇಶ ಪ್ರಕಟಣೆಯನ್ನು ಕಾಲೇಜು ಹೊರಡಿಸಿದೆ. ಈ ಎಲ್ಲಾ ಪದವಿ ಕೋರ್ಸುಗಳು ಮೂರು ವರ್ಷ ಅವಧಿಯದ್ದಾಗಿದ್ದು, ಹೊಸ ಶಿಕ್ಷಣ ನೀತಿ (NEP) ಗೆ ಸೇರಿರುತ್ತದೆ.

ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ

ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವೈಶಿಷ್ಟ್ಯತೆಗಳು:

  • ನುರಿತ ಪ್ರಾಧ್ಯಾಪಕ ವರ್ಗ
  • ವಿದ್ಯಾರ್ಥಿಗಳಿಗೆ ಕನಿಷ್ಟ ಬೋಧನಾ ಶುಲ್ಕ
  • ಸರಕಾರದಿಂದ ವಿದ್ಯಾರ್ಥಿನಿಯರಿಗೆ ಶುಲ್ಕ ಮರುಪಾವತಿ ಸೌಲಭ್ಯ
  • ಶಿಸ್ತುಬದ್ಧ ಶೈಕ್ಷಣಿಕ ವಾತಾವರಣ
  • ಐಸಿಟಿ ಸೌಲಭ್ಯಯುಕ್ತ ತರಗತಿ ಕೊಠಡಿಗಳು
  • ಸುಸಜ್ಜಿತ ಪ್ರಯೋಗಾಲಯ ಹಾಗೂ ಗ್ರಂಥಾಲಯ
  • ವಿಶಾಲ ಆಟದ ಮೈದಾನ ಹಾಗೂ ಸುಸಜ್ಜಿತ ಮಲ್ಟಿಜಿಮ್
  • ಕಾಲೇಜಿನ ವೇಳೆಗನುಸಾರ ಸುಳ್ಯ ಬಸ್ ನಿಲ್ದಾಣದಿಂದ ಸಾರಿಗೆ ಸೌಲಭ್ಯ

ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು ಕಾಲೇಜಿನ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ 7483896145 ಗೆ ಕರೆ ಮಾಡಿ ವಿಚಾರಿಸಬಹುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.