ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು 2017-18ನೇ ಸಾಲಿನ ಯುವ ವಿಜ್ಞಾನಿ ಪ್ರಶಸ್ತಿಗಾಗಿ ಪ್ರಸ್ತುತ 9ನೇ ತರಗತಿಯಿಂದ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸುತ್ತಿದೆ.

 

Karnataka Rajya Vijnana Parishat invites applications for the “Young Scientist Award 2017-18”. Students those who study between 9th standard to 2nd PUC only can apply for the Young Scientist Award of Karnataka Rajya Vijnana Parishat.

 

ಉದ್ದೇಶ :

ಈ ಪ್ರಶಸ್ತಿಯನ್ನು ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಾಯೋಜಕತ್ವದಲ್ಲಿ ಸ್ಥಾಪಿಸಲಾಗಿದ್ದು, ವಿದ್ಯಾರ್ಥಿಗಳನ್ನು ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸುವುದು, ಎಳೆಯ ವಯಸ್ಸಿನಲ್ಲೇ ವೈಜ್ಞಾನಿಕ ವಿಧಾನದ ಮನವರಿಕೆ ಮಾಡುವುದು, ರಾಜ್ಯ/ರಾಷ್ಟ್ರದ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸುವುದು, ಮೂಲ ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಹಾಗೂ ಚಿಂತನ ಕೌಶಲ್ಯವನ್ನು ವೃದ್ಧಿಸುವುದು, ವೈಜ್ಞಾನಿಕ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ವಿಜ್ಞಾನ ಪರಿಷತ್, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೆರವಿನೊಂದಿಗೆ, ಶಿಕ್ಷಣ ಇಲಾಖೆ, ಪ.ಪೂ.ಶಿಕ್ಷಣ ಇಲಾಖೆ ಸಹಯೋಗದಿಂದ ಈ ಯೋಜನೆ ಕೈಗೊಳ್ಳಲಾಗಿದೆ. ಇಂತಹ ಚಟುವಟಿಕೆಯಲ್ಲಿ ಭಾಗವಹಿಸಿ ಪ್ರತಿಭೆಯನ್ನು ತೋರಿದ ವಿದ್ಯಾರ್ಥಿಗಳನ್ನು ಆಯ್ದು ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಪ್ರಕಟಣೆಯನ್ನು ನೋಡಬಹುದು.

 

ಪ್ರಶಸ್ತಿಗಳ ವಿವರ :

ಜಿಲ್ಲಾ ಮಟ್ಟ

  1. ಪ್ರಥಮ ಬಹುಮಾನ : ರೂ. 5000/-
  2. ದ್ವಿತೀಯ ಬಹುಮಾನ : ರೂ. 3000/-
  3. ತೃತೀಯ ಬಹುಮಾನ : ರೂ. 2000/-

ರಾಜ್ಯ ಮಟ್ಟ :

  1. 4 ಯುವ ವಿಜ್ಞಾನಿಗಳಿಗೆ ತಲಾ ರೂ. 10000/-

 

ಅರ್ಜಿ ಸಲ್ಲಿಸುವ ವಿಧಾನ :

ವಿದ್ಯಾರ್ಥಿಗಳು ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಅದರೊಂದಿಗೆ ಆರನೇ ತರಗತಿಯಿಂದ ಭಾಗವಹಿಸಿದ ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು/ಸ್ಪರ್ಧೆಯಲ್ಲಿ ದೊರೆತಿರುವ ಪ್ರಶಸ್ತಿ, ಬಹುಮಾನ, ಪ್ರಶಂಸಾ ಪತ್ರ, ಸನ್ಮಾನ ಪತ್ರ ಇತ್ಯಾದಿಗಳ ದೃಢೀಕರಿಸಿದ ಜೆರಾಕ್ಸ್ ಪ್ರತಿಯೊಂದಿಗೆ 14-06-2018 ರೊಳಗಾಗಿ ತಮ್ಮ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿಗೆ ಹಾಗೂ ಅರ್ಜಿಯ ಒಂದು ಪ್ರತಿಯನ್ನು ಅಂಚೆ/ಕೊರಿಯರ್ ಮೂಲಕ ಗೌರವ ಕಾರ್ಯದರ್ಶಿ , ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಯುವ ವಿಜ್ಞಾನ ವಿಭಾಗ , ವಿಜ್ಞಾನ ಭವನ, ನಂ.24/2, 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-560070 ಇವರಿಗೆ ಸಲ್ಲಿಸುವುದು.

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14.06.2018
ಜಿಲ್ಲಾ ಮಟ್ಟದ ಸ್ಪರ್ಧೆಯ ದಿನಾಂಕ : 23.06.2018
ರಾಜ್ಯ ಮಟ್ಟದ ಸಮಾವೇಶ : 2018ರ ಜುಲೈ ತಿಂಗಳಲ್ಲಿ

ಸಹಾಯವಾಣಿ ಸಂಖ್ಯೆ : 080-26718939, 9483549159, 9008442557, ಅಥವಾ 9449530245

 

ಅಧಿಕೃತ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಲಿಸಿ

ಅರ್ಜಿಗಾಗಿ ಇಲ್ಲಿ ಕ್ಲಿಕ್ಕಿಸಿ